ಏಕ್ವಿಲ: ಖಗೋಳದ 88 ನಕ್ಷತ್ರ ಪುಂಜಗಳಲ್ಲಿ ಒಂದು; ಉತ್ತರಾರ್ಧ ಗೋಳದಲ್ಲಿ ಆಕಾಶಗಂಗೆಯಲ್ಲಿ ಇದೆ. ಇದರ ವ್ಯಾಪ್ತಿಯ ವಿವರ : ವಿಷುವದಂಶ (ರೈಟ್ ಅಸೆನ್ಷನ್) 18 ಗಂ. 40 ಮಿ.-20 ಗಂ. 35 ಮಿ.; ಘಂಟಾವೃತ್ತಾಂಶ (ಡೆಕ್ಲಿನೇಷನ್) 180 ಉ-120  ದ. ಏಕ್ವಿಲ ಪುಂಜದ ಪ್ರಧಾನ ನಕ್ಷತ್ರ ಶ್ರವಣ (ಆಲ್ಟೇರ್). ಇದು ಬರಿಗಣ್ಣಿಗೆ ಸುಲಭವಾಗಿ ಕಾಣುತ್ತದೆ. ಇದರ ಒತ್ತೊತ್ತಿಗೆ ಎರಡು ಬದಿಗಳಲ್ಲಿ ಒಂದೊಂದು ಕ್ಷೀಣ ನಕ್ಷತ್ರ ಇದೆ. ಇವು ಮೂರೂ ಸರಿಸುಮಾರಾಗಿ ಉತ್ತರ-ದಕ್ಷಿಣಕ್ಕೆ ಚಾಚಿರುವ ಕಿರಿ ಸರಳರೇಖೆ ರಚಿಸುತ್ತವೆ. ನಡುವಿನ ಪ್ರಕಾಶಮಾನ ನಕ್ಷತ್ರವೇ ಶ್ರವಣ. ಏಕ್ವಿಲ ಪುಂಜದಲ್ಲಿ ಹಲವಾರು ನೋವಾ ನಕ್ಷತ್ರಗಳು ಕಾಣಿಸಿಕೊಂಡಿವೆ. ಇವುಗಳ ಪೈಕಿ ಸುಪ್ರಸಿದ್ಧವಾದದ್ದು ಏಕ್ವಿಲೇ III (1918).					         *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ